ಸಮೂಹ ಸಂಪನ್ಮೂಲ ಕೇಂದ್ರ, ಸೋಮವಾರಪೇಟೆ

Sunday, February 27, 2022

ಮಾದರಿ ಶಾಲೆ

ಶಾಲೆ ಎಂಬುವುದು ಪರಸ್ಪರ ಸಹಕಾರ ತತ್ತ್ವದ ಅಡಿಯಲ್ಲಿ ನಡೆಯುವ ಸಂಸ್ಥೆ. ಶಿಕ್ಷಕ-ವಿದ್ಯಾರ್ಥಿ-ಪೋಷಕ-ಸಮುದಾಯ-ಅಧಿಕಾರಿ ವರ್ಗ.. ಹೀಗೆ ಎಲ್ಲರೊಂದಿಗೂ ಆರೋಗ್ಯಕರ ಸಂಬಂಧವನ್ನಿಟ್ಟುಕೊಂಡು ಕೆಲಸ ಮಾಡುವ ಸಂಸ್ಥೆ.

ಈ ಸಮತೋಲನವನ್ನು ಕಾಯ್ದುಕೊಳ್ಳುವುದೇ ಇಂದಿನ ಸವಾಲು. ಖಾಸಗೀ ಶಾಲೆಗಳು ಅದನ್ನು ಬೇರೆ ಬೇರೆ ಮಾರ್ಗದಲ್ಲಿ ಸಾಧಿಸುತ್ತವೆ. ಆದರೆ ನಿಜವಾದ ಸವಾಲಿರುವುದು ಸರ್ಕಾರಿ ಶಾಲೆಗಳಲ್ಲಿ.
*


ಸೋಮವಾರಪೇಟೆ ಕ್ಲಸ್ಟರಿನ ಸ.ಹಿ.ಪ್ರಾ.ಶಾಲೆ ಚೌಡ್ಲು - ಇಲ್ಲಿ ಈ ಬಗೆಯ ಸಮನ್ವಯವನ್ನು ಗುರುತಿಸಬಹುದು. ಏಕೆಂದರೆ:
- ಎಲ್ಲಾ ಶಿಕ್ಷಕರಿಗೂ ಶಾಲೆಯ ಎಲ್ಲಾ (ಶೈಕ್ಷಣಿಕ - ಆಡಳಿತಾತ್ಮಕ) ವಿವರಗಳ ಅರಿವಿರುವುದು.
- ಯಾರಿಂದಲೂ ಹೇಳಿಸಿಕೊಳ್ಳದೆ ತಮ್ಮ ಪಾಡಿಗೆ ಕೆಲಸ ಮಾಡುವವರು.
- ಎಲ್ಲಾ ಶಿಕ್ಷಕರಿಗೂ ಅಂತರ್ಜಾಲ ಬಳಕೆಯ ಕುರಿತು ಅರಿವಿರುವುದು.


- ದಾಖಲಾತಿ ಹೆಚ್ಚಳಕ್ಕೆ ಎಲ್ಲರೂ ಶ್ರಮಿಸುವುದು.
- ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಡನಾಡುವುದು.
- ಸಮುದಾಯವನ್ನು ಶಾಲೆಯ ಅಭಿವೃದ್ಧಿ ಕೆಲಸಗಳಿಗೆ ತೊಡಗಿಸಿಕೊಳ್ಳುವುದು.
- ಇಲಾಖೆಯ ಎಲ್ಲಾ ಸ್ತರದ ಸಿಬ್ಬಂದಿ/ಅಧಿಕಾರಿಗಳೊಂದಿಗೆ ಶಿಸ್ತುಬದ್ಧವಾಗಿ ವ್ಯವಹರಿಸುವುದು.
- ಗುಣಾತ್ಮಕ ಶಿಕ್ಷಣಕ್ಕೆ ಶ್ರಮವಹಿಸುವುದು.


ಸಮೂಹ ಸಂಪನ್ಮೂಲ ಕೇಂದ್ರ ಸೋಮವಾರಪೇಟೆಯು ಚೌಡ್ಲು ಸಹಿಪ್ರಾ ಶಾಲೆಯನ್ನು ಅಭಿನಂದಿಸುತ್ತದೆ.


No comments:

Post a Comment

ಮುಖ್ಯ ಶಿಕ್ಷಕರಾಗಿ ಉತ್ತಮ ಕಾರ್ಯನಿರ್ವಹಣೆ

ಹೊಸದಾಗಿ ಶಾಲೆಯ ಜವಾಬ್ದಾರಿ ಬಂದಾಗ ಒಂದೆಡೆ ಆತಂಕ, ಮತ್ತೊಂದೆಡೆ ಹುರುಪು. ಹಲವು ಸವಾಲುಗಳಿದ್ದ ಶಾಲೆಯ ಸಾರಥ್ಯವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಎಸ್.ಜೆ.ಎಂ.ಪ್ರೌಢಶಾಲ...