ಸಮೂಹ ಸಂಪನ್ಮೂಲ ಕೇಂದ್ರ, ಸೋಮವಾರಪೇಟೆ

Sunday, May 1, 2022

ಮುಖ್ಯ ಶಿಕ್ಷಕರಾಗಿ ಉತ್ತಮ ಕಾರ್ಯನಿರ್ವಹಣೆ

ಹೊಸದಾಗಿ ಶಾಲೆಯ ಜವಾಬ್ದಾರಿ ಬಂದಾಗ ಒಂದೆಡೆ ಆತಂಕ, ಮತ್ತೊಂದೆಡೆ ಹುರುಪು. ಹಲವು ಸವಾಲುಗಳಿದ್ದ ಶಾಲೆಯ ಸಾರಥ್ಯವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಎಸ್.ಜೆ.ಎಂ.ಪ್ರೌಢಶಾಲೆಯ ರಾಣಿ ಮೇಡಂ ಅವರಿಗೆ ಸಲ್ಲುತ್ತದೆ.


ಮುಖ್ಯ ಶಿಕ್ಷಕರಿಗೆ ಮುಖ್ಯವಾಗಿ ಎರಡು ಸವಾಲುಗಳಿವೆ- ಶಾಲೆಯ ಒಳ-ಹೊರಗಿನ ಕುರಿತಾದದ್ದು, ಇಲಾಖೆಯ ಆಡಳಿತಾತ್ಮಕ ಸಂಗತಿಗಳ ಬಗೆಗಿನದು. ಈ ಎರಡನ್ನೂ ನಿಭಾಯಿಸಲು ಮುಖ್ಯ ಶಿಕ್ಷಕರು ಶಾಲೆಯ ಎಲ್ಲಾ ಹಂತದ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಹೀಗೆ risk ತೆಗೆದುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿದ ರಾಣಿ ಮೇಡಂ ಅವರನ್ನು ಸಮೂಹ ಸಂಪನ್ಮೂಲ ಕೇಂದ್ರ ಸೋಮವಾರಪೇಟೆಯು ಅಭಿನಂದಿಸುತ್ತದೆ.

Saturday, March 26, 2022

ಸಾಧಕರಿಗೆ ಸನ್ಮಾನ

ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 

 ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಗಳಿಸಿದ ಎಚ್ ಆರ್ ವೃಂದಾ ಮತ್ತು ರಾಜ್ಯಮಟ್ಟದ Inspire Award ಸ್ಪರ್ಧೆಯಲ್ಲಿ ಭಾಗವಹಿಸಿದ ಎ ಪಿ ಬೋಪಣ್ಣ ಅವರಿಗೆ ಮತ್ತು ಶಾಲೆಯ ಶಿಕ್ಷಕ ವೃಂದಕ್ಕೆ ಸಮೂಹ ಸಂಪನ್ಮೂಲ ಕೇಂದ್ರ ಸೋಮವಾರಪೇಟೆಯ ಪರವಾಗಿ ಅಭಿನಂದನೆಗಳು 

Sunday, February 27, 2022

ಮಾದರಿ ಶಾಲೆ

ಶಾಲೆ ಎಂಬುವುದು ಪರಸ್ಪರ ಸಹಕಾರ ತತ್ತ್ವದ ಅಡಿಯಲ್ಲಿ ನಡೆಯುವ ಸಂಸ್ಥೆ. ಶಿಕ್ಷಕ-ವಿದ್ಯಾರ್ಥಿ-ಪೋಷಕ-ಸಮುದಾಯ-ಅಧಿಕಾರಿ ವರ್ಗ.. ಹೀಗೆ ಎಲ್ಲರೊಂದಿಗೂ ಆರೋಗ್ಯಕರ ಸಂಬಂಧವನ್ನಿಟ್ಟುಕೊಂಡು ಕೆಲಸ ಮಾಡುವ ಸಂಸ್ಥೆ.

ಈ ಸಮತೋಲನವನ್ನು ಕಾಯ್ದುಕೊಳ್ಳುವುದೇ ಇಂದಿನ ಸವಾಲು. ಖಾಸಗೀ ಶಾಲೆಗಳು ಅದನ್ನು ಬೇರೆ ಬೇರೆ ಮಾರ್ಗದಲ್ಲಿ ಸಾಧಿಸುತ್ತವೆ. ಆದರೆ ನಿಜವಾದ ಸವಾಲಿರುವುದು ಸರ್ಕಾರಿ ಶಾಲೆಗಳಲ್ಲಿ.
*


ಸೋಮವಾರಪೇಟೆ ಕ್ಲಸ್ಟರಿನ ಸ.ಹಿ.ಪ್ರಾ.ಶಾಲೆ ಚೌಡ್ಲು - ಇಲ್ಲಿ ಈ ಬಗೆಯ ಸಮನ್ವಯವನ್ನು ಗುರುತಿಸಬಹುದು. ಏಕೆಂದರೆ:
- ಎಲ್ಲಾ ಶಿಕ್ಷಕರಿಗೂ ಶಾಲೆಯ ಎಲ್ಲಾ (ಶೈಕ್ಷಣಿಕ - ಆಡಳಿತಾತ್ಮಕ) ವಿವರಗಳ ಅರಿವಿರುವುದು.
- ಯಾರಿಂದಲೂ ಹೇಳಿಸಿಕೊಳ್ಳದೆ ತಮ್ಮ ಪಾಡಿಗೆ ಕೆಲಸ ಮಾಡುವವರು.
- ಎಲ್ಲಾ ಶಿಕ್ಷಕರಿಗೂ ಅಂತರ್ಜಾಲ ಬಳಕೆಯ ಕುರಿತು ಅರಿವಿರುವುದು.


- ದಾಖಲಾತಿ ಹೆಚ್ಚಳಕ್ಕೆ ಎಲ್ಲರೂ ಶ್ರಮಿಸುವುದು.
- ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಡನಾಡುವುದು.
- ಸಮುದಾಯವನ್ನು ಶಾಲೆಯ ಅಭಿವೃದ್ಧಿ ಕೆಲಸಗಳಿಗೆ ತೊಡಗಿಸಿಕೊಳ್ಳುವುದು.
- ಇಲಾಖೆಯ ಎಲ್ಲಾ ಸ್ತರದ ಸಿಬ್ಬಂದಿ/ಅಧಿಕಾರಿಗಳೊಂದಿಗೆ ಶಿಸ್ತುಬದ್ಧವಾಗಿ ವ್ಯವಹರಿಸುವುದು.
- ಗುಣಾತ್ಮಕ ಶಿಕ್ಷಣಕ್ಕೆ ಶ್ರಮವಹಿಸುವುದು.


ಸಮೂಹ ಸಂಪನ್ಮೂಲ ಕೇಂದ್ರ ಸೋಮವಾರಪೇಟೆಯು ಚೌಡ್ಲು ಸಹಿಪ್ರಾ ಶಾಲೆಯನ್ನು ಅಭಿನಂದಿಸುತ್ತದೆ.


Thursday, February 24, 2022

SDMC ಕ್ಲಸ್ಟರ್ ಮಟ್ಟದ ತರಬೇತಿ

ದಿನಾಂಕ 22-02-2022ರಂದು ಸೋಮವಾರಪೇಟೆ ಕ್ಲಸ್ಟರ್ ಮಟ್ಟದ SDMC ತರಬೇತಿ BRC ಕಚೇರಿಯಲ್ಲಿ ನಡೆಯಿತು. 



Tuesday, February 15, 2022

ಕಾಂಪೌಂಡ್ ಕಾಮಗಾರಿ


ಯಡೂರು ಶಾಲೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ   ರೂ. 5 ಲಕ್ಷದ ಕಾಂಪೌಂಡ್ ಕಾಮಗಾರಿ ಪ್ರಗತಿಯಲ್ಲಿದೆ   









ಮುಖ್ಯ ಶಿಕ್ಷಕರಾಗಿ ಉತ್ತಮ ಕಾರ್ಯನಿರ್ವಹಣೆ

ಹೊಸದಾಗಿ ಶಾಲೆಯ ಜವಾಬ್ದಾರಿ ಬಂದಾಗ ಒಂದೆಡೆ ಆತಂಕ, ಮತ್ತೊಂದೆಡೆ ಹುರುಪು. ಹಲವು ಸವಾಲುಗಳಿದ್ದ ಶಾಲೆಯ ಸಾರಥ್ಯವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಎಸ್.ಜೆ.ಎಂ.ಪ್ರೌಢಶಾಲ...