ಸಮೂಹ ಸಂಪನ್ಮೂಲ ಕೇಂದ್ರ, ಸೋಮವಾರಪೇಟೆ

Monday, October 11, 2021

ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕ್ಲಸ್ಟರಿನ ಕೀರ್ತಿಯನ್ನು ಹೆಚ್ಚಿಸಿದವರು


ಈಚೆಗೆ, ವಿವಿಧ ಇಲಾಖೆಗಳು/ ಸಂಸ್ಥೆಗಳು ಏರ್ಪಡಿಸಿದ ಸ್ಪರ್ಧೆಗಳಲ್ಲಿ ಸೋಮವಾರಪೇಟೆ ಸಮೂಹ ಸಂಪನ್ಮೂಲ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ ಪ್ರಶಂಸೆಯನ್ನು ಪಡೆದಿದ್ದಾರೆ. ಸಮೂಹ ಸಂಪನ್ಮೂಲ ಕೇಂದ್ರ ಸೋಮವಾರಪೇಟೆಯ ಪರವಾಗಿ ಅವರಿಗೆ ಅಭಿನಂದನೆಗಳು.

                           ****



ಓಜೋ಼ನ್ ದಿನದ ಪ್ರಯುಕ್ತ ನಡೆದ ಸ್ಲೋಗನ್ ಬರೆವಣಿಗೆ ಹಾಗೂ ಪೋಸ್ಟರ್ ತಯಾರಿಯಲ್ಲಿ ಪಾಲ್ಗೊಂಡು ಸ.ಪ.ಪೂ.ಕಾಲೇಜು ಸೋಮವಾರಪೇಟೆಯ ವಿದ್ಯಾರ್ಥಿಗಳಾದ ಪಂಚಮಿ, ಶಿವಾನಿ, ಸಂಜನ,ಸೌಜನ್ಯ- ಇವರು ಭಾರತ ಸರ್ಕಾರದ ಪರಿಸರ ಸಚಿವಾಲಯದಿಂದ ಪ್ರಶಸ್ತಿ ಪತ್ರವನ್ನು ಪಡೆದಿದ್ದಾರೆ.






------------------------------------  

 ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಭೌತಿಕ ಸಮಾವೇಶಕ್ಕೆ ಪರ್ಯಾಯವಾಗಿ ಆನ್‍ಲೈನ್ ಮೂಲಕ “ಸುಸ್ಥಿರ ಜೀವನಕ್ಕಾಗಿ ವಿಜ್ಞಾನ” ಎಂಬ ಕೇಂದ್ರ ವಿಷಯದಡಿ ನಡೆದ ಕೊಡಗು ಜಿಲ್ಲಾ ಮಟ್ಟದ 28ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ-2020 ದಲ್ಲಿ ವಿದ್ಯಾರ್ಥಿಗಳು ಸ್ವತಃ ತಾವೇ ವೈಜ್ಞಾನಿಕ ಯೋಜನಾ ಪ್ರಬಂಧ ತಯಾರಿಸಿ ಉತ್ತಮವಾಗಿ ಪ್ರಬಂಧ ಮಂಡಿಸಿ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾದ  OLV ಕಾನ್ವೆಂಟ್ ನ ಕಿರಿಯ ವಿಜ್ಞಾನಿಗಳನ್ನು ನಗರದ ಡಿಡಿಪಿಐ ಕಚೇರಿಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪುರಸ್ಕರಿಸಲಾಯಿತು



------------------------------------ 
67ನೇ ವನ್ಯಜೀವಿ ಸಪ್ತಾಹ ದ ಪ್ರಯುಕ್ತ ಮಡಿಕೇರಿ ವನ್ಯಜೀವಿ ವಿಭಾಗದಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ 132 ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ ಸ.ಪ.ಪೂ.ಕಾಲೇಜು ಸೋಮವಾರಪೇಟೆಯ ವಿದ್ಯಾರ್ಥಿನಿ  ಮಾನ್ಯ ಬಿ. ಎಸ್. ಪ್ರೌಢ ಶಾಲಾ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದಾಳೆ.


------------------------------------ 
ಕನ್ನಡ ಸಿರಿ ಕಸಾಪ ಸ್ನೇಹ ಬಳಗ, ಕುಶಾಲನಗರ - ಇವರು ನಡೆಸಿದ ' ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ನಾವು' ಎಂಬ ವಿಷಯದ ಕುರಿತು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಕಿಬ್ಬೆಟ್ಟ ಶಾಲೆಯ ವಿಶಾಲಾಕ್ಷಿ ಎಂ.ಪಿ., ಹಾನಗಲ್ಲು ಶೆಟ್ಟಳ್ಳಿ ಶಾಲೆಯ ಮಂಜುನಾಥ್ ಎಸ್ ಮೀಸಿ ಅವರು ಭಾಗವಹಿಸಿ 'ಉತ್ತಮ' ಹಾಗೂ 'ಅತ್ಯುತ್ತಮ' ಎಂಬ ಪ್ರಶಂಸೆಯನ್ನು ಪಡೆದಿದ್ದಾರೆ.

*****


No comments:

Post a Comment

ಮುಖ್ಯ ಶಿಕ್ಷಕರಾಗಿ ಉತ್ತಮ ಕಾರ್ಯನಿರ್ವಹಣೆ

ಹೊಸದಾಗಿ ಶಾಲೆಯ ಜವಾಬ್ದಾರಿ ಬಂದಾಗ ಒಂದೆಡೆ ಆತಂಕ, ಮತ್ತೊಂದೆಡೆ ಹುರುಪು. ಹಲವು ಸವಾಲುಗಳಿದ್ದ ಶಾಲೆಯ ಸಾರಥ್ಯವನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಎಸ್.ಜೆ.ಎಂ.ಪ್ರೌಢಶಾಲ...