ಭಾರತದ ಶೇಕಡಾ 99ರಷ್ಟು ಕಾರ್ಯಕ್ರಮಗಳು ನಿಗದಿಯಾದ ಸಮಯಕ್ಕೆ ಆರಂಭವಾಗುವುದಿಲ್ಲ(ಅಂತ್ಯಗೊಳ್ಳುವುದೂ ಇಲ್ಲ!). ಹಿರಿಯರು ಮಾಡುವ ಈ ತಪ್ಪು ತಲೆಮಾರುಗಳಿಗೆ ಹಬ್ಬುತ್ತದೆ. ಸಮಯ ಎನ್ನುವುದು ಆಹ್ವಾನ ಪತ್ರಿಕೆಗಷ್ಟೆ ಎನ್ನುವ ಅನೂಚಾನ ನಿಲುವು ಮುಂದುವರಿಯುತ್ತದೆ.
ಉಳಿದ ಎಲ್ಲರಿಗೂ ಒಂದು ಬಗೆಯ ಅಲಿಖಿತ ವಿನಾಯಿತಿಯಿದೆ. ಆದರೆ ಬೋಧಕ ವರ್ಗಕ್ಕೇ ಸಮಯ ಪ್ರಜ್ಞೆ ಇಲ್ಲವೆಂದರೆ ಅದು ಅಕ್ಷಮ್ಯ. ಏಕೆಂದರೆ ಇಡೀ ಒಂದು ತಲೆಮಾರು ಅವರ ಅನುಕರಣೆಯಲ್ಲಿರುತ್ತದೆ.
*
ಸೋಮವಾರಪೇಟೆ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ನಡೆದ/ನಡೆಯುವ ಹಲವು ಸಭೆ/ತರಬೇತಿ/ಕಾರ್ಯಕ್ರಮದಲ್ಲಿ ನಿಗದಿತ ಸಮಯಕ್ಕೆ ಸಿದ್ಧತೆಗಳೊಂದಿಗೆ ಹಾಜರಾದ( ಹಾಜರಾಗುವ) ಇಬ್ಬರು ಶಿಕ್ಷಕರನ್ನು ಇಲ್ಲಿ ಪರಿಚಯಿಸುತ್ತಿದ್ದೇನೆ: ಹಾನಗಲ್ಲು ಶೆಟ್ಟಳ್ಳಿ ಶಾಲೆಯ ತೆರೇಸ ಸಿಕ್ವೇರ ಮತ್ತು ಜ್ಞಾನವಿಕಾಸ ಶಾಲೆಯ ಕವಿತಾ. ಇಲಾಖೆ ಅವರನ್ನು ಅಭಿನಂದಿಸುತ್ತದೆ.
ಕೇವಲ ಹಾಜರಾಗುವುದಷ್ಟೇ ಅಲ್ಲ, ಸಿದ್ಧತೆಯೊಂದಿಗೆ ನಿಗದಿತ ವೇಳೆಗೆ ಹಾಜರಾಗುವುದು ಸಮಯ ಪ್ರಜ್ಞೆ. ಸೇವೆಯಲ್ಲಿ dedication ಇಲ್ಲದಿದ್ದರೆ ಸಮಯಪ್ರಜ್ಞೆ ಖಂಡಿತವಾಗಿಯೂ ಒಡಮೂಡುವುದಿಲ್ಲ.
*
ಕನಿಷ್ಟ ಒಬ್ಬ ವಿದ್ಯಾರ್ಥಿ ಇವರೀರ್ವರಿಂದ ಪ್ರಭಾವಿತರಾಗಿ ಅನುಕರಿಸಿದರೆ ಸಾರ್ಥಕವಾಗುತ್ತದೆ.
*
ಸಿ.ಆರ್.ಪಿ. ಸೋಮವಾರಪೇಟೆ


ಅಭಿನಂದನೆಗಳು.
ReplyDeleteTeresa miss, I am proud to tell you that I am your student in class 2 at OLV convent school.
ReplyDeleteThanks for your support and educating me.
Your student,
Chethan HB